ಹೊರಗಡೆಯಿಂದ ಒರಟಾದ ಈ ಅನಾನಸ್ ಒಳಗೆ ಬಹಳ ಸಿಹಿ ಇದು ಬಹಳ ರುಚಿಕರ ಹಾಗೂ ಇದರ ಉಪಯೋಗಗಳು ಹಲವಾರು.ಇದು ಸೌತ್ ಅಮೆರಿಕದಲ್ಲಿ ಮೊದಲು ಹುಟ್ಟಿದ ಹಣ್ಣು.ಇದರಲ್ಲಿ ವಿಟಮಿನ್ ಸಿ ಹಾಗೂ ಮ್ಯಾಂಗನೀಸ್ ಹೆಚ್ಚು ಪ್ರಮಾಣದಲ್ಲಿದೆ.ಹಾಗೂ ಜೀರ್ಣ ಕ್ರಿಯೆಗೆ ಉಪಯೋಗವಾಗುವ ಸೈಬರ್ ಹಾಗೂ ಬ್ರೊಮೆಲೈನ್ ಅಂಶ ಇದರಲ್ಲಿ ಅಡಗಿದೆ.
ಪ್ರಯೋಜನಗಳು :
• ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ :
ಅನಾನಸ್ ನಲ್ಲಿರುವ ಆ್ಯಂಟಿ ಆಕ್ಸಿಡೆಂಟ್, ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ.ಹಾಗಾಗಿ ಇದು ಡಯಾಬಿಟಿಸ್ ಹಾಗೂ ಹೃದಯಕ್ಕೆ ಸಂಬಂಧ ರೋಗಗಳು ಬಾರದಂತೆ ನೋಡಿಕೊಳ್ಳುತ್ತದೆ.
• ಕಣ್ಣಿನ ಆರೋಗ್ಯಕ್ಕೆ ಬಹಳ ಸಹಾಯಕಾರಿ:
ಅನಾನಸ್ ನಲ್ಲಿ ವಿಟಮಿನ್ ಸಿ, ಆ್ಯಂಟಿ ಆಕ್ಸಿಡೆಂಟ್ಗಳು, ಮ್ಯಾಂಗನೀಸ್ ಹೆಚ್ಚು ಪ್ರಮಾಣದಲ್ಲಿ ಇದೆ ಹಾಗಾಗಿ ಇದು ಕಣ್ಣಿನ ಜೀವಕೋಶಗಳು ಹಾಳಾಗದಂತೆ ತಡೆಯುತ್ತದೆ.ಕಣ್ಣಿನ ಆರೋಗ್ಯದ ಬಗ್ಗೆ ಕಾಳಜಿ ಇರುವವರೆಲ್ಲ ಅನಾನಸ್ ಹಣ್ಣನ್ನು ಸೇವಿಸಿದರೆ ನಿಮ್ಮ ಕಣ್ಣಿನ ಆರೋಗ್ಯ ಬಹಳ ಉತ್ತಮವಾಗಿರುತ್ತದೆ.
• ಕ್ಯಾನ್ಸರ್ ರೋಗವನ್ನು ತಡೆಯುತ್ತದೆ:
ಅನಾನಸ್ ಗೆ ಕ್ಯಾನ್ಸರ್ ಅಂತಹ ದೊಡ್ಡ ರೋಗವನ್ನು ತಡೆಯುವ ಶಕ್ತಿ ಇದೆ.ಇದರಲ್ಲಿರುವ ಬ್ರೊಮೆಲೈನ್ ಅಂಶವು ಕ್ಯಾನ್ಸರ್ ಸೆಲ್ಸ್ ಗಳ ವಿರುದ್ಧ ಹೋರಾಡಿ ಹಲವಾರು ಕ್ಯಾನ್ಸರ್ಗಳನ್ನು ತಡೆಯುತ್ತದೆ.
• ಶೀತ ಹಾಗೂ ಕೆಮ್ಮು ತೊಲಗಿಸಲು ಉಪಯೋಗಕಾರಿ:
ಅನಾನಸ್ ನಲ್ಲಿ ಬ್ರೊಮಿಲೈನ್ ಹಾಗೂ ವಿಟಮಿನ್ ಸಿ ಇರುವುದರಿಂದ ಇದು ಶೀತ ಮತ್ತು ಕೆಮ್ಮಿನಿಂದ ಪಾರಾಗಲು ಬಹಳ ಸಹಾಯಕಾರಿ ಹಾಗಾಗಿ ಶೀತ ಅಥವಾ ಕೆಮ್ಮು ಸಮಸ್ಯೆಯಿಂದ ತೊಂದರೆ ಪಡುತ್ತಿದ್ದರೆ ಅನಾನಸ್ ಸೇವಿಸಿ ಶೀತ ಹಾಗೂ ಕೆಮ್ಮನ್ನು ತಡೆಗಟ್ಟಿರಿ.
-ತನ್ವಿ ಬಿ