ಆಲೂಗೆಡ್ಡೆ ಬೆಳೆ ಕ್ಷೇತ್ರೋತ್ಸವ2021 ( #ರೈತಮಿತ್ರಹಾಸನ್ನ್ಯೂಸ್ )

0

ಹಾಸನ ಜ.21 (ಹಾಸನ್_ನ್ಯೂಸ್) !, ತೋಟಗಾರಿಕೆ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ, ಸೋಮನಹಳ್ಳಿಕಾವಲು, ಹಾಸನದ ರಾಷ್ಟ್ರೀಯ ಕೃಷಿ ವಿಕಾಸಯೋಜನೆಯಡಿಯಲ್ಲಿ ಅಭಿವೃದ್ಧಿಪಡಿಸಿದ ತಂತ್ರಜ್ಞಾನದಲ್ಲಿ ಅಂಗಾಂಶ ಕೃಷಿ ಕುಡಿ ಕಾಂಡ ಸಸಿಗಳಿಂದ ಆಲೂಗಡ್ಡೆ ಉತ್ಪಾದನೆ ವಿಷಯದ ಕುರಿತು ತೋಟಗಾರಿಕೆ ಇಲಾಖೆ, ಹಾಸನ ಇವರ ಸಂಯುಕ್ತ ಆಶ್ರಯದಲ್ಲಿ ಆಲೂಗಡ್ಡೆ ಬೆಳೆ ಕ್ಷೇತ್ರೋತ್ಸವವನ್ನು ಜ.19 ರಂದು ಅತ್ಯಂತ ಯಶಸ್ವಿಯಾಗಿ ಆಚರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಸುಮಾರು 100 ಕ್ಕೂ ಮೇಲ್ಪಟ್ಟು ಆಲೂಗಡ್ಡೆ ಬೆಳೆಗಾರರು ಮತ್ತು ನರ್ಸರಿ ಉತ್ಪಾದಕರು ಕ್ಷೇತ್ರೋತ್ಸವವನ್ನು ವೀಕ್ಷಿಸಿ ಹೊಸ ತಂತ್ರಜ್ಞಾನದ ಪ್ರಾತ್ಯಕ್ಷಿಕೆಯ ಉಪಯೋಗ ಪಡೆದರು.


   ಈ ಕ್ಷೇತ್ರೋತ್ಸವದಲ್ಲಿ ತೋಟಗಾರಿಕೆ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ಮುಖ್ಯಸ್ಥರು ಡಾ. ಹೆಚ್. ಅಮರನಂಜುಂಡೇಶ್ವರವರು ಪ್ರಾಸ್ಥಾವಿಕ ಭಾಷಣ ಮಾಡಿದರು.

ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬಾಗಲಕೋಟೆಯ ಸಂಶೋಧನಾ ನಿರ್ದೇಶಕರಾದ ಡಾ. ಡಿ. ಆರ್. ಪಾಟೀಲ್‍ರವರು ಅಧ್ಯಕ್ಷತೆ ವಹಿಸಿ ಡಾ. ವೈ. ಕೆ. ಕೋಟಿಕಲ್, ವಿಸ್ತರಣಾ ನಿರ್ದೇಶಕರು ಉದ್ಗಾಟಿಸಿದರು.

ಮುಖ್ಯ ಅತಿಥಿಗಳಾಗಿ ಕಾರೇಕೆರೆ ಕೃಷಿ ಮಹಾವಿದ್ಯಾಲಯದ ಮುಖ್ಯಸ್ಥರು ಡಾ. ಎನ್. ದೇವಕುಮಾರ, ತೋಟಗಾರಿಕೆ ಉಪನಿರ್ದೇಶಕ ಹೆಚ್. ಆರ್. ಯೋಗೇಶ, ಪ್ರಾದೇಶಿಕ ತೋಟಗಾರಿಕೆ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ, ಬೆಂಗಳೂರು ಪ್ರಾಧ್ಯಾಪಕರಾದ ಡಾ. ಪಿ. ಎಮ್. ಮುನಿಕೃಷ್ಣಪ್ಪ ಹಾಗೂ ಕೃಷಿ ವಿಜ್ಞಾನ ಕೇಂದ್ರ, ಕಂದಲಿಯ ಮುಖ್ಯಸ್ಥರು ಡಾ. ರಾಜೇಗೌಡ, ತೋಟಗಾರಿಕೆ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ಮುಖ್ಯಸ್ಥರು ಡಾ. ಕಿರಣಕುಮಾರ್. ಕೆ. ಸಿ., ಅಂತರರಾಷ್ಟ್ರೀಯ ಆಲೂಗಡ್ಡೆ ಸಂಸ್ಥೆ, ಬೆಂಗಳೂರು ರವೀಂಧ್ರನಾಥ ರೆಡ್ಡಿ, ಕೃಷಿ ಸಂಶೋಧನಾ ಕೇಂದ್ರ, ಗುಂಜೇವು ಹಿರಿಯ ಕ್ಷೇತ್ರ ಅಧೀಕ್ಷಕರಾದ ಡಾ. ಎಮ್. ಎಸ್. ನಾಗರಾಜ್, ಗ್ರೀನ್ ಇನೋವೇಶನ್ ಸೆಂಟರ್, ಬೆಂಗಳೂರು ಸುಹಾಸ್ ಹಾಗೂ ಹಾಸನ ಜಿಲ್ಲೆಯ ಎಲ್ಲಾ ತಾಲ್ಲೂಕಿನ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರಗಳು ಬಾಗವಹಿಸಿದ್ದರು.

LEAVE A REPLY

Please enter your comment!
Please enter your name here