ವೃದ್ಧೆ ಕೊಲೆ- ಅತ್ಯಾಚಾರ ಪ್ರಕರಣ : ಅರಸೀಕೆರೆಯ ಈ ಆರೋಪಿ ಬಂಧನ

0

ಹಾಸನ : ಕಾಮುಕ ರಾಕ್ಷಸನೋರ್ವ ವಯೋವೃದ್ಧೆಯನ್ನು ದಾರಿ ತೋರಿಸುವ ನೆಪದಲ್ಲಿ ಕೊಲೆಗೈದು “ಅತ್ಯಾಚಾರ ಎಸಗಿರುವ ಅಮಾನುಷ ಘಟನೆ ಅರಸೀಕೆರೆ ತಾಲ್ಲೂಕಿನ ಯರೇಹಳ್ಳಿ ಗ್ರಾಮದಲ್ಲಿ ನಡೆದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ತಿಳಿಸಿದರು.

ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಲೆ ಮಾಡಿ ಅತ್ಯಾಚಾರ ಎಸಗಿದ ಕಾಮುಕ ಯರೇಹಳ್ಳಿ ಗ್ರಾಮದ ಮಿಥುನ್‌ಕುಮಾರ್ (32) ಎಂಬಾತನನ್ನು ಬಂಧಿಸಲಾಗಿದ್ದು, ಈಗಾಗಲೇ ಕಾನೂನು ರೀತಿ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಘಟನೆ ವಿವರ

ಏ.1ರಂದು ಅರಸೀಕೆರೆ ತಾಲ್ಲೂಕಿನ ಮಾಡಾಳು ಗ್ರಾಮದ ಗೌರಮ್ಮ (85) ಎಂಬ ವೃದ್ಧೆ ಪಕ್ಕದ ಯರೇಹಳ್ಳಿ ಗ್ರಾಮದಲ್ಲಿರುವ

ತಮ್ಮ ಜಮೀನಿನ ಹತ್ತಿರ ಹೋಗುತಿದ್ದಾಗ ದಾರಿ ತಪ್ಪಿದ್ದಾರೆ. ಈ ಸಂದರ್ಭದಲ್ಲಿ ಮಿಥುನ್ ಮತ್ತು ಅವರ ತಾಯಿ ಜಮೀನಿನ ಹತ್ತಿರ ಕೆಲಸ ಮಾಡುತ್ತಿದ್ದು, ಈ ವೇಳೆ ವೃದ್ಧೆಗೆ ದಾರಿ ತೋರುವಂತೆ ಮಿಥುನ್ ತಾಯಿ ತಿಳಿಸಿದ್ದಾರೆ. ನಂತರ ಈ ಕಾಮುಕ ವೃದ್ಧೆಯನ್ನು ಒಂದು ಮರದ ಹತ್ತಿರ ನಿಲ್ಲಿಸಿ ನಂತರ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಆಕೆ ತೀವ್ರ ವಿರೋಧ ವ್ಯಕ್ತಪಡಿಸಿದಾಗ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿ ಅತ್ಯಾಚಾರ ಎಸಗಿದ್ದಾನೆ. ನಂತರ ಮೃತ ದೇಹವನ್ನು ಅಲ್ಲೇ ಬಿಟ್ಟು ಆತ ಪರಾರಿಯಾಗಿದ್ದನು.

ಈ ಸಂಬಂಧ ಏ.2ರಂದು ನಗ್ನ ಸ್ಥಿತಿಯಲ್ಲಿ ವೃದ್ಧೆಯ ಮೃತ ದೇಹ ಪತ್ತೆಯಾಗಿದ್ದು, ಈ ಸಂಬಂಧ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಹಲವು ಆಯಾಮಗಳಲ್ಲಿ ತನಿಖೆ ನಡೆಸಲು ಮುಂದಾಗಿದ್ದಾರೆ. ಪ್ರಾಥಮಿಕವಾಗಿ ಅಜ್ಜಿಯನ್ನು ಯಾವುದೋ ಪ್ರಾಣಿಗಳು ಕೊಲೆ ಮಾಡಿರುವುದಾಗಿ ಶಂಕೆ ವ್ಯಕ್ತಪಡಿಸಲಾಯಿತು. ನಂತರ ಆಕೆಯ ವಸ್ತ್ರಗಳು ಮರದ ಬುಡದಲ್ಲಿ ಪತ್ತೆಯಾದಾಗ ಇದು ಪ್ರಾಣಿಗಳಿಂದ ಆಗಿರುವ ಕೃತ್ಯವಲ್ಲ ಎಂದು ತಿಳಿದು ಬಂದಿತು. , ನಂತರ ಆಸ್ತಿಗಾಗಿ ಅಥವಾ ಚಿನ್ನಾಭರಣಕ್ಕಾಗಿ ಕೊಲೆ ನಡೆದಿರುಬಹುದು ಎಂದು ಶಂಕಿಸಲಾಯಿತು. ಈ ಆಯಾಮದಲ್ಲೂ ತನಿಖೆ ನಡೆಸಿ ಕೆಲವರನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಯಿತು. ನಂತರ ಅಂತಿಮವಾಗಿ ಇದೊಂದು ಅತ್ಯಾಚಾರಕ್ಕಾಗಿ ಕೊಲೆ ನಡೆದಿರುವುದಾಗಿ ತಿಳಿದು ಬಂದಿದೆ. ಈ ಪ್ರಕರಣವನ್ನು ಭೇದಿಸಲು ಪೊಲೀಸರು ಸಾಕಷ್ಟು ಹರಸಾಹಸಗಳನ್ನು ಪಟ್ಟು ನಂತರ ಅತ್ಯಾಚಾರಕ್ಕಾಗಿ ಈ ಕೊಲೆ ನಡೆದಿದೆ ಎಂದು ತಿಳಿದುಬಂದಿದೆ. ಈ ಸಂಬಂಧ ಆರೋಪಿ ಮಿಥುನ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯಾಂಶವನ್ನು ಒಪ್ಪಿಕೊಂಡಿದ್ದಾನೆ ಎಂದು ಎಸ್ಪಿ ವಿವರಿಸಿದರು.ಸುಳಿವು ಸಿಕ್ಕಿದ್ದು ಹೇಗೆ ?

ವೃದ್ಧೆ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಪ್ರಕರಣವನ್ನು ತನಿಖೆ ನಡೆಸುತ್ತಿರುವಾಗ ಪೊಲೀಸರಿಗೆ ಹಲವು ಮಹತ್ವದ ಸುಳಿವುಗಳು ದೊರೆತವು. ಅವುಗಳ ಜಾಡು ಹಿಡಿದು ಹೊರಟಾಗ ಇದೊಂದು ನೀಚ ಕೃತ್ಯದಿಂದಾಗಿ ವೃದ್ಧೆಯ ಕೊಲೆಯಾಗಿದೆ ಎಂದು ಬಯಲಾಗಿದೆ. ಪೊಲೀಸರಿಗೆ ಸಿಕ್ಕಿ ಆ ಸುಳಿವುಗಳು ಯಾವುವುದೆಂದರೆ, ಮೊದಲನೆಯದಾಗಿ ಸ್ಥಳೀಯರೊಬ್ಬರು ಮಿಥುನ್ ವೃದ್ಧೆಯೊಂದಿಗೆ ಹೋಗುತ್ತಿದ್ದಾಗ ನೋಡಿದ್ದು ಅವರು ಪೊಲೀಸರಿಗೆ ತಿಳಿಸಿದ್ದಾರೆ. ಎರಡನೆಯದಾಗಿ ಮಿಥುನ್ ತಾಯಿ ದಾರಿ ತಪ್ಪಿ ಬಂದಿದ್ದ ಆ ವೃದ್ಧೆ ಗೌರಮ್ಮನನ್ನು ಬಿಟ್ಟು ಬರುವಂತೆ ಕಳುಹಿಸಿದ್ದೆ ಎಂದು ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. ಈ ಸುಳಿವುಗಳ ಆಧಾರದ ಮೇಲೆ ಆರೋಪಿಯನ್ನು ಕೇವಲ ಮೂಾಲ್ಕು ದಿನಗಳಲ್ಲಿ ಬಂಧಿಸುವ ಮೂಲಕ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.ಈ ಹಿಂದೆಯೂ ಈ ಅತ್ಯಾಚಾರಕ್ಕೆ ಯತ್ನ

ಈ ಕಾಮುಕ ಮಿಥುನ್ ಕಳೆದ 5 ವರ್ಷಗಳ ಹಿಂದೆ ತನ್ನದೇ ಗ್ರಾಮದ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಲು ಪ್ರಯತ್ನಪಟ್ಟಿದ್ದನು. ಈ ಸಂಬಂಧ ಗ್ರಾಮಸ್ಥರೆಲ್ಲರೂ ರಾಜಿ ಪಂಚಾಯಿತಿ ಮಾಡಿ ತೀರ್ಮಾನ ಮಾಡಲಾಗಿತ್ತು. ಇದೇ ಸುಳಿವಿನ ಆಧಾರದ ಮೇಲೆ ಆತನನ್ನು ವಶಕ್ಕೆ ಪಡೆದುಕೊಳ್ಳಲಾಯಿತು. ಆದರೆ ಈತ ತನ್ನ ಹಳೇ ಚಾಳಿಯನ್ನು ಮುಂದುವರಿಸಿರುವ ಬಗ್ಗೆ ಪೊಲೀಸರ ತನಿಖೆಯಿಂದ ಬಯಲಾದ ಮೇಲೆ ಇಡೀ ಗ್ರಾಮವೇ ಬೆಚ್ಚಿ ಬಿದ್ದಿದೆ.

ಇನ್ನಿತರೆ ಕುಕೃತ್ಯಗಳ ಬಗ್ಗೆ ವಿಚಾರಣೆ

ಯರೇಹಳ್ಳಿ ಗ್ರಾಮದಲ್ಲಿ ನಡೆದ ದೃಷ್ಕೃತ್ಯ ಇಡೀ ಅರಸೀಕೆರೆ ತಾಲ್ಲೂಕು ಜನರನ್ನೇ ಬೆಚ್ಚಿ ಬೀಳಿಸಿದೆ. ಇಂತಹ ಕೃತ್ಯ ಎಸಗಿರುವ ಆರೋಪಿ ಮಿಥುನ್ ಇನ್ನಿತರೆ ಕುಕೃತ್ಯಗಳ ಎಸಗಿರುವ ಬಗ್ಗೆ ಪೊಲೀಸರು ತೀವ್ರ ವಿಚಾರಣೆ ಮುಂದುವರಿಸಿದ್ದಾರೆ.

LEAVE A REPLY

Please enter your comment!
Please enter your name here