•ವ್ಯಕ್ತಿಯೊಬ್ಬರ ಕೋವಿಡ್‌ ಪರೀಕ್ಷಾ ವರದಿಯನ್ನು ತಪ್ಪಾಗಿ ನೀಡಿದ್ದಾಗಿ ಆರೋಪಿಸಿ, ಆ ವ್ಯಕ್ತಿಯ ಸಂಬಂಧಿಕರಾದ ಹಟ್ಟಿ ಗ್ರಾಮದ ಕೆಲವರಿಂದ ಹಲ್ಲೆ?? ಲ್ಯಾಬ್ ಟೆಕ್ನೀಷನ್ ಧರಣೇಶ್ ದೃಷ್ಟಿ ಹೀನ!!

0

ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ದೊಡ್ಡ ಮೇಟಿಕುರ್ಕೆ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಲ್ಯಾಬ್ ತಂತ್ರಜ್ಞ ಧರಣೀಶ್ ರ ಮೇಲೆ ಕೆಲವರು ಸೋಮವಾರ ರಾತ್ರಿ ಹಲ್ಲೆ , ಬಲಗಣ್ಣಿಗೆ ಗಂಭೀರ ಗಾಯ
•ವ್ಯಕ್ತಿಯೊಬ್ಬರ ಕೋವಿಡ್‌ ಪರೀಕ್ಷಾ ವರದಿಯನ್ನು ತಪ್ಪಾಗಿ ನೀಡಿದ್ದಾಗಿ ಆರೋಪಿಸಿ, ಆ ವ್ಯಕ್ತಿಯ ಸಂಬಂಧಿಕರಾದ ಹಟ್ಟಿ ಗ್ರಾಮದ ಮಂಜುನಾಥ, ಪ್ರದೀಪ ಹಾಗೂ ಶಶಿ ರವರಿಂದ ಹಲ್ಲೆ??
•ಇದೇ ಗ್ರಾಮದ ವ್ಯಕ್ತಿಯೊಬ್ಬರು ಸೆ.12ರಂದು ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್‌ ಪರೀಕ್ಷೆ ಮಾಡಿಸಿಕೊಂಡಿದ್ದರಂತೆ •ಸೆ.15ಕ್ಕೆ ವರದಿ ಪಾಸಿಟಿವ್‌ ಬಂದಿದ್ದರಿಂದ ಕ್ವಾರಂಟೈನ್‌ ಆಗಲು ಹೇಳಲಾಗಿರುತ್ತದೆ
•ಇವರೊಂದಿಗೆ ಪ್ರಾಥಮಿಕ ಸಂಪರ್ಕಿತರಿದ್ದವರಿಗೆ , ಪರೀಕ್ಷೆಗೆ ಒಳಪಡುವಂತೆ ತಿಳಿಸಲು ಮನವಿ ಮಾಡಲಾಗಿತ್ತು.
•ಆದರೆ, ಇದಕ್ಕೆ ವಿರೋಧ ವ್ಯಕ್ತಪಡಿಸಿದ ಸೋಂಕಿತ ವ್ಯಕ್ತಿಯ ಹತ್ತಿರದ ಸಂಬಂಧಿ ಮಂಜುನಾಥ್, ‘ಚಿಕ್ಕನಾಯಕನಹಳ್ಳಿ ಆಸ್ಪತ್ರೆಯಲ್ಲಿ ಮಾಡಿಸಿದ ಪರೀಕ್ಷೆಯಲ್ಲಿ ನೆಗೆಟಿವ್ ಬಂದಿದೆ, ನಿಮ್ಮ ಆಸ್ಪತ್ರೆಯಲ್ಲಿ ಮಾತ್ರ ಪಾಸಿಟಿವ್‌ ಎಂದು ಸುಳ್ಳು ವರದಿ ನೀಡಿದ್ದೀರಿ ಎಂದು ಆರೋಪಿಸುತ್ತಾರೆ
•ನಂತರ ಗಲಾಟೆ ನಡೆದಿದೆ , ಲ್ಯಾಬ್ ಟೆಕ್ನಿಷನ್ ಗೆ  ಇನ್ನಿಬ್ಬರೊಂದಿಗೆ ಸೇರಿಕೊಂಡು ಹಲ್ಲೆ ನಡೆಸಿರುತ್ತಾರೆ ಎನ್ನಲಾಗಿದೆ
•ಹಲ್ಲೆಗೊಳಗಾಗಿ ಅಸ್ವಸ್ಥಗೊಂಡ ಧರಣೇಶ್ ಅವರ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆ ಒಳಪಡಿಸಲಾಗಿದೆ. •ಬಲಗಣ್ಣಿನ ದೃಷ್ಟಿ ಮರಳುವ ಸಾಧ್ಯತೆ ಕಡಿಮೆ ಎನ್ನಲಾಗಿದೆ

ಧರಣೇಶ್ ಸ್ನೇಹಿತರು ಕುಟುಂಬಸ್ಥರು ಪ್ರತಿಭಟನೆ ಮಾಡಿದರು: ಹಲ್ಲೆ ವಿರೋಧಿಸಿ , ವೈದ್ಯರು / ಸಿಬ್ಬಂದಿ ಆಸ್ಪತ್ರೆ ಮುಂಭಾಗ ಪ್ರತಿಭಟನೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಂಡು ನ್ಯಾಯ ಒದಗಿಸಲು ಮನವಿ ಮಾಡಿದರು

– ಅರಸೀಕೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here