ಹಾಸನ : ” ಹಾಸನ ನಗರದಲ್ಲಿ ನಡೆಯುವ ಪ್ರಸಿದ್ಧ ದನಗಳ ಜಾತ್ರೆಯನ್ನು ಇದೇ ಡಿ.20ರಿಂದ 29ರವರೆಗೆ ನಡೆಯಲಿದೆ ” -ಮೋಹನ್ ಕುಮಾರ್ (ನಗರಸಭೆ ಅಧ್ಯಕ್ಷ)
ಎರಡು ವರ್ಷದಿಂದ ಕೋವಿಡ್ ಸೋಂಕಿನ ಭೀತಿಯಿಂದ ದನಗಳ ಜಾತ್ರೆ ನಡೆಸಲು ಅವಕಾಶವಿರಲಿಲ್ಲ. ಹಾಸನ ನಗರದಲ್ಲಿ ವಿಶೇಷವಾಗಿ ಆಚರಿಸುವ ಹಬ್ಬಗಳಂತೆ ಇದು ಕೂಡ ಒಂದು ಎಂದು ನಾವು ಸ್ಥಳೀಯ ವಾಗಿ ಅಕ್ಕಪಕ್ಕದ ಗ್ರಾಮದ ರೈತರು ಸಂಭ್ರಮಿಸಿ ದನಗಳ ಜಾತ್ರೆಯನ್ನು ಆಚರಿಸುತ್ತಾ ಬಂದಿದ್ದೇವೆ , ಜಾತ್ರೆ ನಡೆಸಲು ಬೇಕಾದ ಮೂಲ ಸೌಕರ್ಯಗಳ ವ್ಯವಸ್ಥೆಗೆ ಶಾಸಕ ಪ್ರೀತಂ ಜೆ.ಗೌಡ ಬೆಂಬಲ ಸೂಚಿಸಿದ್ದು. ಕುಡಿಯುವ ನೀರು, ರಸ್ತೆ, ವಿದ್ಯುತ್ ದೀಪಾಲಂಕಾರವನ್ನು ಕಲ್ಪಿಸಲು ಕ್ರಮ ವಹಿಸಲಾಗುವುದು ಮತ್ತು ಒಳ್ಳೆ ರಾಸುಗಳಿಗೆ ಬಹುಮಾನ ನೀಡಲು ಸಹ ತೀರ್ಮಾನ ಕೈಗೊಳ್ಳಲಾಗಿದೆ ಎಂದು ನಗರ ಸಭೆ ಅಧ್ಯಕ್ಷರು ಸಂದೇಶ ಹೊರಡಿಸಿದ್ದಾರೆ.
ಈ ಸಂದರ್ಭದಲ್ಲಿ 3ನೇ ವಾರ್ಡ್ನ ದಯಾನಂದ್, 29ನೇ ವಾರ್ಡಿನ ಬಿಜೆಪಿ ಮುಖಂಡ ಪ್ರದೀಪ್ ಹಾಜರಿದ್ದರು.