ಹಾಸನ ಮಾ.08 (ಹಾಸನ್_ನ್ಯೂಸ್ !,
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು 2021 ನೇ ಸಾಲಿನ ಮುಂಗಾರು ಹಂಗಾಮಿನ ಆಲೂಗೆಡ್ಡೆ ಬಿತ್ತನೆ ಹಾಗೂ ಪೂರೈಕೆಗೆ ಕುರಿತು ಸಭೆ ನಡೆಸಿ ಮಾತನಾಡಿದ ಅವರು ಕೃಷಿಕರ ಹಿತ ಸಂರಕ್ಷಣೆಗೆ ಗರಿಷ್ಠ ಮುಂಜಾಗ್ರತೆ ವಹಿಸಿ ಪೂರೈಕೆಯಾಗುವ ಎಲ್ಲ ಬಿತ್ತನೆ ಬೀಜದ ಸುರಕ್ಷತೆ, ಉತ್ಪಾದನಾ ಸಾಮಥ್ರ್ಯದ ಬಗ್ಗೆ ಪರೀಕ್ಷೆ ನಡೆಸಿ ಗುಣಮಟ್ಟ ಖಾತರಿ ನಂತರ ವಿತರಿಸಿ ಎಂದರು.
ಸಭೆಯಲ್ಲಿ ಹಾಜರಿದ್ದ ಅಧಿಕಾರಿಗಳು ವಿಜ್ಞಾನಿಗಳು ಹಾಗೂ ವರ್ತಕರು ಮೇ ತಿಂಗಳ ಎರಡನೇ ವಾರದಲ್ಲಿ ಆಲೂಗಡ್ಡೆ ಬಿತ್ತನೆ ಮಾಡಿದರೆ ಪೂರಕವಾಗಬಹುದು ಎಂದು ಅನಿಸಿಕೆ ವ್ಯಕ್ತಪಡಿಸಿದರು ಅದರಂತೆ ರೈತರಿಗೆ ಸೂಕ್ತ ಜಾಗೃತಿ ಮೂಡಿಸಿ ಬೀಜೋಪಚಾರ, ಭೂಮಿ ಸಿದ್ಧತೆ ಬಗ್ಗೆ ತಿಳುವಳಿಕೆ ಮೂಡಿಸಿ ಎಂದರು.
ಎಪಿಎಂಸಿ ಆವರಣ ಹಾಗೂ ಶೈತ್ಯಗಾರ ಬಳಿಯೇ ಬಿತ್ತನೆ ಬೀಜ ಖರೀದಿಗೆ ಲಭ್ಯವಿರುತ್ತದೆ ಅಲ್ಲದೆ ಎಪಿಎಂಸಿ ಪ್ರಾಂಗಣದಲ್ಲಿ ರಸಗೊಬ್ಬರ, ಔಷಧಿ, ರಾಸಾಯನಿಕಗಳ ಮಾರಾಟದ ವ್ಯವಸ್ಥೆ ಕೂಡ ಮಾಡಬೇಕಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ರೈತರ ಹಿತದೃಷ್ಟಿಯಿಂದ ನಾಟಿ ಮಾಡಿದ ನಂತರ ಉತ್ತಮ ಮೊಳಕೆ ಒಡೆಯಲು ವರ್ತಕರು ಶೈತ್ಯಾಗಾರಗಳು ಪ್ರಾರಂಗಣಗಳಲ್ಲೆ ಬಿತ್ತನೆ ಬೀಜಗಳನ್ನು ಒಣಗಿಸಿ ನಂತರ ರೈತರಿಗೆ ತೂಕದಲ್ಲಿ ಯಾವುದೇ ವ್ಯತ್ಯಾಸವಾಗದಂತೆ ವಿತರಿಸಲು ಕ್ರಮ ಕೈಗೊಳ್ಳಲು ಸೂಚಿಸಿದರು.
ತೋಟಗಾರಿಕೆ ಉಪನಿರ್ದೇಶಕರಾದ ಯೋಗೀಶ್ ಅವರು ವೈಜ್ಞಾನಿಕ ಕಾರಣಗಳನ್ನು ವಿವರಿಸಿ ಮುಂದಿನ ದಿನಗಳಲ್ಲಿ ಸಸಿಗಳನ್ನು ವಿತರಿಸಲು ತೋಟಗಾರಿಕೆ ಇಲಾಖೆ ಕ್ರಮ ಕೈಗೊಳ್ಳುತ್ತಿದೆ ಎಂದು ತಿಳಿಸಿದರು.
ಸಭೆಯಲ್ಲಿ ಉಪವಿಭಾಗಧಿಕಾರಿ ಬಿಎ ಜಗದೀಶ್ ಜಂಟಿ ಕೃಷಿ ನಿರ್ದೇಶಕರಾದ ರವಿ ಹಾಗೂ ವರ್ತಕ ಸಂಘದ ಪ್ರತಿನಿಧಿಗಳಾದ ಗೋಪಾಲ್ , ಸೋಮನಹಳ್ಳಿ ಕಾವಲು ಆಲೂಗೆಡ್ಡೆ ಸಂಶೋಧನಾ ಕೇಂದ್ರದ ವಿಜ್ಞಾನಿಗಳಾದ ಅಮರ ನಂಜುಂಡೇಶ್ವರ ಹಾಗೂ ವಿವಿಧ ಅಧಿಕಾರಿಗಳು ಹಾಜರಿದ್ದರು. #farmersnews #hassan