ದಿನಾಂಕ 15/09/2020 ರಂದು ಹೂವಣ್ಣ, ಡಿ.ಆರ್ ರವರು ಹಾಸನ ನಗರ ಪೊಲೀಸ್ ಠಾಣೆಗೆ ಹಾಜರಾಗಿ ಲಿಖಿತ ದೂರನ್ನು ನೀಡಿದ್ದಾರೆ, ಸದರಿ ದೂರಿನಲ್ಲಿ ಫಿರ್ಯಾದಿ ಮತ್ತು ಪತ್ನಿ ಶ್ರೀಮತಿ ಹೇಮಲತಾ ಅವರು ಸ್ವಂತ ಊರಾದ ದೊಡ್ಡ ಭಂಡಾರ ಗ್ರಾಮ, ಕೊಡ್ಲಿಪೇಟೆ, ಹೋಬಳಿ, ಕೊಡಗು ಜಿಲ್ಲೆ ಇಲ್ಲಿಗೆ ಹಬ್ಬಕ್ಕೆಂದು ಹೋಗಿ ವಾಪಸ್ ಬರುವಷ್ಟರಲ್ಲಿ ಯಾರೋ ಕಳ್ಳರು ಮನೆ ಬಾಗಿಲನ್ನು ಹೊಡೆದು ಒಳಗೆ ಪ್ರವೇಶಿಸಿ ಮನೆಯ ಬೀರುವಿನಲ್ಲಿಟ್ಟಿದ್ದ ಸುಮಾರು 1,50,000/- ರೂ. ಬೆಲೆ ಬಾಳುವ ಚಿನ್ನಾಭರಣವನ್ನು ಕಳವು ಮಾಡಿಕೊಂಡು ಹೋಗುತ್ತಾರೆಂದು ನೀಡಿದ ದೂರಿನ ಮೇರೆಗೆ ಹಾಸನ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಳ್ಳಲಾಗಿದೆ. ಆರೋಪಿಯ ಪತ್ತೆಗೆ ಬಗ್ಗೆ ವಿಶೇಷ ತಂಡ ರಚನೆ :
ಈ ಪ್ರಕರಣವನ್ನು ಪತ್ತೆ ಮಾಡುವ ಸಲುವಾಗಿ ಜಿಲ್ಲಾ ಪೊಲೀಸ್ ಅಧೀಕ್ಷಕರು, ಹಾಸನ ಜಿಲ್ಲೆ, ಹಾಸನ ರವರು ವಿಶೇಷ ವನ್ನು ರಚಿಸಿದ್ದಾರೆ, ಸದರಿ ತಂಡವನ್ನು ತಂಡದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀಮತಿ ನಂದಿನಿಯವರ ಮೇಲುಸ್ತುವಾರಿಯಲ್ಲಿ ಹಾಸನ ಉಪ ವಿಭಾಗದ ಪೊಲೀಸ್ ಅಧೀಕ್ಷಕರಾದ ಶ್ರೀ ಪುಟ್ಟಸ್ವಾಮಿಗೌಡ ರವರ ಉಸ್ತುವಾರಿಯಲ್ಲಿ ಹಾಸನ ನಗರ ವೃತ್ತದ ನಿರೀಕ್ಷಕರಾದ ಶ್ರೀ ಕೃಷ್ಣರಾಜು. ರವರ ನೇತೃತ್ವದಲ್ಲಿ ಪಿಎಸ್‌ಐ ಮತ್ತು ಸಿಬ್ಬಂದಿಗಳ ತಂಡವನ್ನು ರಚಿಸಲಾಗಿತ್ತು. ಈ ತಂಡದವರು ಪತ್ರ ಕಾರ್ಯ ನಡೆಸಿ ದಿನಾಂಕ 07/10/2020 ರಂದು ಮಧ್ಯಾಹ್ನ 2 ಗಂಟೆಯ ಸಮಯದಲ್ಲಿ ಹಾಸನ ನಗರದ ಬೇಲೂರು ರಸ್ತೆಯ ವಿಜಯನಗರ ಬಸ್‌ಸ್ಟಾಪ್ ಬಳಿ ಅನುಮಾನಸ್ವಾದವಾಗಿ ನಿಂತಿದ್ದ ಈ ಕೆಳಕಂಡ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಂಡು ಹಾಸನ ನಗರ ಪೊಲೀಸ್ ಠಾಣೆಗೆ ಕರೆದುಕೊಂಡು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಯಿತು. ಆರೋಪಿಯ ಹೆಸರು ಮತ್ತು ವಿಳಾಸ :
ಗೋಪಿಕೃಷ್ಣ (m) ಗೋಪಿ ಬಿನ್ ರಾಜಪ್ಪ, 20 ವರ್ಷ, ಕೂಲಿ ಕೆಲಸ, ನೀಲಗುಂದ ಗ್ರಾಮ ಹರಪನಹಳ್ಳಿ ತಾಲೂಕು ಬಳ್ಳಾರಿ
ಆರೋಪಿ ನೀಡಿದ ಸುಳಿವಿನ ಮೇರೆಗೆ ಸುಮಾರು 1,50,000 ರೂ, ಬೆಲೆ ಬಾಳುವ ಚಿನ್ನದ ಆಭರಣವನ್ನು ತನಿಖೆಯ ವೇಳೆಯಲ್ಲಿ ಅಮಾನತ್ತು ಪಡಿಸಿಕೊಂಡು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಈ ಪ್ರಕರಣವನ್ನು ಛೇಡಿಸುವಲ್ಲಿ ಯಶಸ್ವಿಯಾದ ಹಾಸನ ನಗರ ವೃತ್ತದ ಪೊಲೀಸ್ ವೃತ್ತ ನಿರೀಕ್ಷಕರಾದ ಶ್ರೀ ಕೃಷ್ಣರಾಜ ಮತ್ತು ಅವರ ತಂಡದ ಅಧಿಕಾರಿ ಮತ್ತು ಸಿಬ್ಬಂದಿಗಳ ಕಾರ್ಯವನ್ನು ಪೊಲೀಸ್ ಅಧೀಕ್ಷಕರು, ಹಾಸನ ಜಿಲ್ಲೆ,
ಹಾಸನ ರವರು ಶ್ಲಾಘಿಸಿ ವಿಶೇಷ ಬಹುಮಾನ ಘೋಷಿಸಿರುತ್ತಾರೆ.
ಈ ಪ್ರಕಟಣೆಯನ್ನು ಜಿಲ್ಲಾ ಪೊಲೀಸ್ ಕಛೇರಿಯಿಂದ