ಬೆಣ್ಣೆಹಣ್ಣು ಯಾಕಿಷ್ಟು ದುಬಾರಿ? ಇದರಲ್ಲಿ ನಿಜಕ್ಕೂ ಅಷ್ಟು ಉಪಯೋಗವಾಗುವ ಅಂಶಗಳು ಇದ್ದೀಯಾ? ಇದನ್ನು ನೀವು ತಿಳಿಯಬೇಕೆ?

0

ಬೆಣ್ಣೆಹಣ್ಣು ಹೆಸರಿಗೆ ತಕ್ಕ ಹಾಗೆ ಬೆಣ್ಣೆಯ ಹಾಗೆ ಮೃದು ಮತ್ತು ರುಚಿಕರ.ಇದರಲ್ಲಿ ಆ್ಯಂಟಿಆಕ್ಸಿಡೆಂಟ್ಸ್ , ವಿಟಮಿನ್ ಬಿ೨,ಬ೩,ಬಿ೫,ಬ೬,
ಮೆಗ್ನೀಸಿಯಮ್ ಅಂಶಗಳು ಹೆಚ್ಚು ಪ್ರಮಾಣದಲ್ಲಿ ಇವೆ.

ಪ್ರಯೋಜನಗಳು:

*ಜೀರ್ಣಕ್ರೀಯೆಯನ್ನು ಸುಲಭವಾಗಿ ಮಾಡುತ್ತದೆ:
ಈ ಹಣ್ಣು ಜೀರ್ಣಕ್ರೀಯೆಯನ್ನು ಬಹಳ ಸುಲಭವಾಗಿ ಮಾಡುತ್ತದೆ. ಮಲಬದ್ಧತೆ ಸಮಸ್ಯೆಯಿಂದ ಪಾರಾಗಲು ಕಷ್ಟಪಡುತ್ತಿದ್ದರೆ,ಎರಡು ದಿನಕ್ಕೆ ಒಂದು ಬಾರಿ ತಿಂದು ಈ ಸಮಸ್ಯೆಯಿಂದ ಮುಕ್ತಿ ಪಡೆಯಿರಿ.

*ತೂಕ ಇಳಿಸಲು ಕಷ್ಟವೇ ?
ತೂಕವನ್ನು ಇಳಿಸಲು ಎಷ್ಟೋ ಪ್ರಯೋಗಗಳ ನಂತರವೂ ಫಲಿತಾಂಶ ದೊರೆತಿಲ್ಲ ಅಂತ ಚಿಂತಿಸಬೇಡಿ .ಬೆಣ್ಣೆ ಹಣ್ಣು ನಿಮ್ಮ ಕ್ಯಾಲರಿಯನ್ನು ನಿಯಂತ್ರಿಸುತ್ತದೆ.ಇದರಿಂದ ನಿಮ್ಮ ತೂಕ ಇಳಿಸಲು ನೆರವಾಗುತ್ತದೆ.

*ಕಣ್ಣಿನ ದೃಷ್ಟಿ ಸಮಸ್ಯೆಯಿಂದ ಪಾರಾಗಿ
ಚಿಕ್ಕ ವಯಸ್ಸಿನಲ್ಲಿ ಕಣ್ಣು ದೃಷ್ಟಿ ಸಮಸ್ಯೆಯನ್ನು ಅನುಭವಿಸುತ್ತಿರುವವರು ಈ ಹಣ್ಣನ್ನು ಉಪಯೋಗಿಸಿ ನಿಮ್ಮ ಕಣ್ಣಿನ ದೃಷ್ಟಿಯನ್ನು ಸುಧಾರಣೆ ಮಾಡಿಕೊಳ್ಳಬಹುದು.ಅಧಿಕ ಮಟ್ಟದಲ್ಲಿ ಇರುವ ವಿಟಮಿನ್ ಸಮಸ್ಯೆಯನ್ನು ಪಾರು ಮಾಡುತ್ತದೆ.

*ಖಿನ್ನತೆಯಿಂದ ಹೊರಬರಲು ಯೋಚಿಸುತ್ತಿದ್ದೀರಾ ?
ಬೆಣ್ಣೆಹಣ್ಣು ನಿಮ್ಮ ಮೆದುಳಿನಲ್ಲಿ ಉತ್ತಮ ಭಾವನೆ ಉಂಟು ಮಾಡಲು ಸಹಾಯ ಮಾಡುತ್ತದೆ.ಇದರಿಂದ ನೀವು ಸದಾ ಧನಾತ್ಮಕವಾಗಿ(ಪಾಸಿಟಿವ್ ) ಇರಬಹುದು.

ಬೆಣ್ಣೆ ಹಣ್ಣನ್ನು ಟೋಸ್ಟ ರೀತಿಯಾಗಿ , ಸಲಾಡ್ ರೀತಿಯಾಗಿ ಮಾಡಿಕೊಂಡು ಇನ್ನಷ್ಟು ಹೆಚ್ಚು ರುಚಿಕರವಾಗಿ ಭಕ್ಷಿಸಬಹುದು.

ಬರಹ -ತನ್ವಿ.ಬಿ

LEAVE A REPLY

Please enter your comment!
Please enter your name here