ಹಾಸನ: ಐಐಟಿಗಾಗಿ ಮನವಿ
ನವದೆಹಲಿಯ ಸಂಸತ್ ಭವನದಲ್ಲಿ ಮಂಗಳವಾರ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಮಾತುಕತೆ ನಡೆಸಿದರು
ಹಾಸನದಲ್ಲಿ ಐಐಟಿ ಸ್ಥಾಪನೆ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದೆ ” – HD ದೇವೇಗೌಡ (JDS ವರೀಷ್ಠ , ಮಾಜಿ ಪ್ರಧಾನಿ , ರಾಜ್ಯ ಸಭಾ ಸದಸ್ಯರು)
ಹಾಸನಕ್ಕೆ ಪ್ರತಿಷ್ಠಿತ IIT ನೀಡಲು ಸಾಧ್ಯವಿಲ್ಲ ಎಂದು ಈ ಹಿಂದೆ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಪತ್ರ ಬರೆದಿದ್ದ ವಿಷಯವಾಗಿ , ಖುದ್ದು ಪ್ರಧಾನಿಯವರನ್ನು ಭೇಟಿಯಾಗಿ ಮತ್ತೊಮ್ಮೆ ಅವರಿಗೆ IIT ಅಗತ್ಯತೆ ಬಗ್ಗೆ ವಿವರಿಸಿ, ಮನವಿ ಮಾಡಿದರು. ಹಿಂದೆ ಜೆಡಿಎಸ್–ಬಿಜೆಪಿ ಸಮ್ಮಿಶ್ರ ಸರ್ಕಾರ ಇದ್ದಾಗ IIT ಸ್ಥಾಪನೆಯ ಘೋಷಣೆ ಮಾಡಲಾಗಿತ್ತಾದರೂ ಯೋಜನೆಗೆ ಬಂದಿರಲಿಲ್ಲ
ಇದೀಗ ಸಚಿವ ಪ್ರಲ್ಹಾದ ಜೋಶಿಯವರ ಜತೆ ಚರ್ಚಿಸುವುದಾಗಿ ಮೋದಿ ಅವರು ತಿಳಿಸಿದ್ದು , ಮೋದಿ ಭೇಟಿ ನಂತರ ” ನನ್ನ ಜೀವನ ಚರಿತ್ರೆ ” ಪುಸ್ತಕ ಶೀಘ್ರದಲ್ಲೇ ಬಿಡುಗಡೆ ಆಗಲಿದ್ದು, ದಿನಾಂಕ ಇನ್ನೂ ತಿಳಿಸುವೆ ಎಂದರು