ಇದೀಗ ಬಂದ ಸುದ್ದಿ ! ಹಾಸನದ ವೀರ ಪುತ್ರ ಅನುಗವಳ್ಳಿ ಗ್ರಾಮದ ಗುರುಮೂರ್ತಿ(36ವರ್ಷ) ಅವರು ನಿನ್ನೆ 30Dec 2021 ರಂದು ಅನಾರೋಗ್ಯದ ಕಾರಣ ಅಸ್ಸಾಂ ನಲ್ಲಿ ಅಸುನೀಗಿದ್ದಾರೆ .,ಕಳೆದ 19 ವರ್ಷಗಳಿಂದ ಭಾರತೀಯ ಸೇನೆಯಲ್ಲಿ ನಿರಂತರ ಸೇವೆ ಸಲ್ಲಿಸುತ್ತಿದ್ದ ಗುರುಮೂರ್ತಿ ಅವರಿಗೆ ಏಕಾಏಕಿ ಅನಾರೋಗ್ಯ ಸಮಸ್ಯೆ ಎದುರಾಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ .,
ಇವರ ಅಭೂತಪೂರ್ವ ಈವರೆಗಿನ ಸೇವೆಗೆ ನಾವು ಸದಾ ಚಿರ ಋಣಿ , ಹಾಸನ್ ನ್ಯೂಸ್ ಹಾಗೂ ಹಾಸನ ಜನತೆಯ ಪರವಾಗು ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸುತ್ತೇವೆ ., ಮೃತ ಯೋಧನ ಪಾರ್ಥೀವ ಶರೀರ ಇಂದು ಹಾಸನ ನಗರಕ್ಕೆ ಆಗಮಿಸುವ ಸಾಧ್ಯತೆ ಇದೆ