ಚಪ್ಪಲಿ ಹೊಲೆಯುತ್ತಲೇ ಬದುಕು‌ಕಟ್ಟಿದ ಲಕ್ಷ್ಮಮ್ಮ ಅವರ ಅಂಗಡಿಗೆ ASP ಭೇಟಿ

0

ದೊಡ್ಡ ಹುದ್ದೆಯಲ್ಲಿದ್ದರು ಸರಳತೆ ಮೆರೆದ ಹಾಸನ ASP ನಂದಿನಿ ಅವರಿಗೆ ಹಾಸನ ಸಾಮಾಜಿಕ ಜಾಲತಾಣದಲ್ಲಿ ಶ್ಲಾಘನೆಯ ಮಹಾಪೂರ

” ಇದೊಂದು ಅಪರೂಪದ ಮರೆಯಲಾಗದ ಕ್ಷಣ ಎಂದ ನಂದಿನಿ (ASP) “….

ಹಾಸನದ ಮಹಾವೀರ ವೃತ್ತದ ಬಳಿ ಇರುವ ಚಪ್ಪಲಿ ಅಂಗಡಿಯಲ್ಲಿ ಕಳೆದ 30 ವರ್ಷದಿಂದ  ಸೇವೆ ಮಾಡುತ್ತಿರುವ ಲಕ್ಷಮ್ಮನ ಬದುಕೇ ಒಂದು ಸಾಹಸಗಾಥೆ .
ಈ ಬಗ್ಗೆ ಹಾಸನದ ಜಿಲ್ಲಾ ಪೊಲೀಸ್ ಉಪ ವರಿಷ್ಟಾಧಿಕಾರಿ ( ಎಎಸ್ಪಿ ) ನಂದಿನಿ ಮೇಡಂ ಗಮನಿಸಿದ್ದರಂತೆ.

ತಾವು ಕೂಡ ಇವರ ಬಳಿಯೇ ಶೂ ಹೊಲೆಸುವುದು . ಆ ತಾಯಿಯನ್ನು ಭೇಟಿ ಮಾಡಿ ಒಂದು ಗೌರವ ಸಲ್ಲಿಸೋಣ ಎಂದು ಖುದ್ದು ಬಂದು ಸನ್ಮಾನಿಸಿ ಗೌರವ ಅರ್ಪಿಸಿದ್ದಾರೆ .‌

ನಿನ್ನೆ (31ಡಿ.2021) ಸಂಜೆ ಖುದ್ದು ಅವರ ಅಂಗಡಿಗೆ ಭೇಟಿ ನೀಡಿದ ಎಎಸ್ಪಿ ಕಾಯಿ ಸಮೇತ ಮಡಿಲು ತುಂಬಿಸಿ ಗೌರವಗಳೊಂದಿಗೆ ಸನ್ಮಾನಿಸಿದ್ದು ವಿಶೇಷವಾಗಿತ್ತು .

ಬೀದಿ ಬದಿಯಲ್ಲಿ ಚಪ್ಪಲಿ ಹೊಲೆಯುತ್ತಾ ಸ್ವಯಂ ಉದ್ಯೋಗ ಮಾಡಿ ಇಡೀ ಸಮಾಜಕ್ಕೆ ಯುವಕರಿಗೆ ಸ್ವಾಭಿಮಾನಿ ಸಂದೇಶ ಬಿತ್ತೊ ಮಾದರಿಯಂತಿದ್ದಾರೆ ಈ ತಾಯಿ.

ಅಂತಹವರನ್ನು ಅವರಿದ್ದಲ್ಲಿಗೆ ಹೋಗಿ ಸನ್ಮಾನಿಸಿ ಈ ಮೂಲಕ ಸಮಾಜಕ್ಕೆ ಒಂದೊಳ್ಳೆ ಸಂದೇಶ ನೀಡಿದ ಎಎಸ್ಪಿ ನಂದಿನಿ ಮೇಡಂ ಅವರ ನಡೆ ಸಮಾಜಕ್ಕೆ ಮಾದರಿಯಾಗಿದೆ.

ಅಂದ ಹಾಗೆ ಆ ತಾಯಿಯ ಸಾಹಸಗಾಥೆಯ ಸಣ್ಣ ಪರಿಚಯ ಹೀಗಿದೆ :,

ಗಂಡ ಮಾಡುತ್ತಿದ್ದ ಕೆಲಸ ಮುಂದುವರೆಸಿ ಮಕ್ಕಳನ್ನು ಬೆಳೆಸಿದ ಈ ತಾಯಿ ಈಗ ಮೊಮ್ಮಕ್ಕಳನ್ನು ಬರೋಬ್ಬರಿ ಎಂಜಿನಿಯರಿಂಗ್ ಮಾಡಿಸುತ್ತಿದ್ದಾರೆ. ಆ ತಾಯಿ ಜಗತ್ತಿಗೆ ಮಾದರಿಯಲ್ಲದೇ ಮತ್ತೇನು !!

ಈ ವಿಷಯ ನಿಮಗೆ ಇಷ್ಟವಾದರೆ ಶೇರ್ ಮಾಡಿ , ಸಾಮಾಜಿಕ ಕಳಕಳಿಯ ವಿಷಯಕ್ಕೆ ಪ್ರೋತ್ಸಾಹಿಸಿ

ಧನ್ಯವಾದಗಳು

LEAVE A REPLY

Please enter your comment!
Please enter your name here