ಸೋಮವಾರಪೇಟೆ – ಅರಕಲಗೂಡು ಮಾರ್ಗವಾಗಿ ಬೆಂಗಳೂರಿಗೆ ನೂತನ ಬಸ್ ಆರಂಭ
ಸೋಮವಾರಪೇಟೆಯಿಂದ ಕೊಡ್ಲಿಪೇಟೆ ಮಾರ್ಗವಾಗಿ ಬೆಂಗಳೂರಿಗೆ ನೂತನ ಕೆಎಸ್‌ಆರ್‌ಟಿಸಿ ಬಸ್ ಸೇವೆ ಆರಂಭಿಸಿದ್ದು,ಕೊಡಗು ಜಿಲ್ಲೆಯ ಗಡಿಭಾಗ ಕೊಡ್ಲಿಪೇಟೆ ಮಾರ್ಗದಲ್ಲಿ ಬೆಂಗಳೂರಿಗೆ ನೂತನ ಬಸ್ ಸಂಚಾರ ಆರಂಭವಾಗಿದೆ.
ಈ ಬಸ್ ಸಂಜೆ 6 ಗಂಟೆಗೆ ಸೋಮವಾರಪೇಟೆಯಿಂದ ಹೊರಟು ಶನಿವಾರಸಂತೆ ಮಾರ್ಗವಾಗಿ 6:50ಕ್ಕೆ ಕೊಡ್ಲಿಪೇಟೆಗೆ ಬರಲಿದೆ.ಅಲ್ಲಿಂದ 7 ಗಂಟೆಗೆ ಹೊರಟು
ಮಲ್ಲಿಪಟ್ಟಣ – ಅರಕಲಗೂಡು- ಹೊಳೆನರಸೀಪುರ ಮಾರ್ಗವಾಗಿ ರಾತ್ರಿ 11:45 ಕ್ಕೆ ಬೆಂಗಳೂರು ತಲುಪಲಿದ್ದು ಈ ಮಾರ್ಗದ ಪ್ರಯಾಣಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಕೋರಲಾಗಿದೆ.