ಹಾಸನ / ಮಣಿಪುರ : ಇದೇ ಮೇ 11ರಿಂದ 22 ರ ವರೆಗೆ ಮಣಿಪುರದ ಇಂಫಾಲ್‍ನಲ್ಲಿ ನಡೆಯುವ ಮಹಿಳೆಯರ 12ನೇ ಹಾಕಿ ಇಂಡಿಯಾ ಸಬ್ ಜೂನಿಯರ್ಸ್ ನ್ಯಾಷನಲ್ ಟೂರ್ನಿ :
ಕರುನಾಡಿನಿಂದ ಆಯ್ಕೆಯಾದ ತಂಡದಲ್ಲಿ ನಮ್ಮ ಹಾಸನ ಜಿಲ್ಲೆಯ ಬರೋಬ್ಬರಿ ಏಳು ಆಟಗಾರರು ರಾಜ್ಯ ತಂಡಕ್ಕೆ ಆಯ್ಕೆಯಾಗಿರುವುದು , ಹಾಸನ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಲ್ಲಿ ತರಬೇತಿ ಪಡೆಯುತ್ತಿರುವ ಆಟಗಾರರಾದ ಹರ್ಷಿತಾ, ಮೇಘಾವತಿ, ಯಮುನಾ, ಸುಪ್ರಿತಾ, ಸೌಮ್ಯಾ ಮತ್ತು ಚತುರ್ಥಿ ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿಯಾದರೆ , ಹಾಸನದ ರಾಯಲ್ ಅಪೊಲೋ ಇಂಟರ್ ನ್ಯಾಷನಲ್ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಾ ಹಾಕಿ ತರಬೇತಿ ಪಡೆಯುತ್ತಿರುವ ದ್ರವ್ಯ ಎಂ. ಗೌಡ ಸಹ ಅತ್ಯುತ್ತಮ ಆಟ ಪ್ರದರ್ಶಿಸುತ್ತ ಆಯ್ಕೆಯಾಗಿ ಗಮನ ಸೆಳೆದು ತಮ್ಮ ಪಾರಮ್ಯಮೆರೆಯಲು ಸನ್ನದ್ದರಾಗಿದ್ದಾರೆ
ಇದಕ್ಕೆ ತರಬೇತುದಾರ ರವೀಶ್ ಅವರ ಪರಿಶ್ರಮ ಕಾರಣ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಸಿ.ಕೆ.ಹರೀಶ್ ತಿಳಿಸಿದ್ದು , ಇಂಡಿಯಾ ಸಬ್ ಜೂನಿಯರ್ಸ್ ನ್ಯಾಷನಲ್ ಟೂರ್ನಿಯಲ್ಲಿ ಕರ್ನಾಟಕ ಗೆದ್ದು ಬರಲಿ ಎಂದು ಹಾರೈಸುತ್ತ ಈ ವಿಷಯ ಶೇರ್ ಮಾಡೋಣ