ಸಾರ್ವಜನಿಕ ಸ್ಥಳಗಳಲ್ಲಿ ಕೆಲಸದ ಸ್ಥಳಗಳಲ್ಲಿ ಮತ್ತು ಪ್ರಯಾಣದ ಸಮಯದಲ್ಲಿ ಮಾಸ್ಕ್ ಧರಿಸದಿದ್ದರೆ ಇನ್ನುಮುಂದೆ ದಂಡ ಫಿಕ್ಸ್.

0

1,ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಕೆಲಸದ ಸ್ಥಳಗಳಲ್ಲಿ ಮತ್ತು ಪ್ರಯಾಣದ ಸಮಯದಲ್ಲಿ ಮುಖದ ಹೊದಿಕೆಯನ್ನು ಧರಿಸುವುದು ಕಡ್ಡಾಯವಾಗಿದೆ. ಅಗತ್ಯಾನುಸಾರ ಸರಿಯಾಗಿ ಮುಖದ ಹೊದಿಕೆಯನ್ನು ಧರಿಸದಿದ್ದಲ್ಲಿ ಮಹಾನಗರ ಪಾಲಿಕೆ ಪ್ರದೇಶಗಳಲ್ಲಿ ರೂ.1,000/ಮತ್ತು ಇನ್ನುಳಿದ ಪ್ರದೇಶಗಳಲ್ಲಿ ರೂ.500/-ದಂಡ ವಿಧಿಸತಕ್ಕದ್ದು.

2, ಸಾಮಾಜಿಕ ಅಂತರ: ಪ್ರತಿಯೊಬ್ಬರೂ ಸಾರ್ವಜನಿಕ ಸ್ಥಳಗಳಲ್ಲಿ ಕನಿಷ್ಠ 6 ಅಡಿ ಅಂತರವನ್ನು (2 ಗಜ ಅಂತರ ಕಾಯ್ದುಕೊಳ್ಳಬೇಕು.

ಗ್ರಾಹಕರಲ್ಲಿ ದೈಹಿಕ ಅಂತರ ಇರುವುದನ್ನು ಅಂಗಡಿಗಳ ಖಚಿತಪಡಿಸಿಕೊಳ್ಳಿ ತಕ್ಕದ್ದು.

3, ಸಾರ್ವಜನಿಕ ಸ್ಥಳಗಳಲ್ಲಿ ಉಗಿಯುವುದು ಜುಲ್ಮಾನೆ ಯಿಂದ ದಂಡನೀಯವಾಗಿರುತ್ತದೆ. ಈ ಜುಲ್ಮಾನೆ ಮಳೆಯ ಪ್ರಾಧಿಕಾರಗಳು ಕಾನೂನು, ನಿಯಮ ಮತ್ತು ನಿಬಂಧನೆಗಳು ಅನುಸಾರವಾಗಿ ನಿಗದಿಪಡಿಸಬಹುದಾದಂತೆ ಇರತಕ್ಕದ್ದು,

ಕೆಲಸದ ಸ್ಥಳಗಳಲ್ಲಿ ಹೆಚ್ಚುವರಿ ನಿರ್ದೇಶನಗಳು:

4, ಮನೆಯಿಂದ ಕೆಲಸ (Work from Home-WfH): ಸಾಧ್ಯವಾದಷ್ಟು ಮಟ್ಟಿಗೆ

ಮನೆಯಿಂದಲೇ ಕೆಲಸ ಮಾಡುವ ಪದ್ಧತಿಯನ್ನು ಅನುಸರಿಸಬೇಕು.

5, ಕೆಲಸದಲ್ಲಿ ಪಾಳಿಯ ಪದ್ದತಿ/ವ್ಯವಹಾರ ಸಮಯ: ಕಚೇರಿಗಳಲ್ಲಿ ಕೆಲಸದ ಸ್ಥಳಗಳಲ್ಲಿ ಅಂಗಡಿಗಳಲ್ಲಿ ಮಾರುಕಟ್ಟೆಗಳಲ್ಲಿ ಮತ್ತು ಕೈಗಾರಿಕಾ ಮತ್ತು ವಾಣಿಜ್ಯ ಸಂಖ್ಯೆಗಳಲ್ಲಿ ಕೆಲಸದ/ವ್ಯವಹಾರದ ಸಮಯದಲ್ಲಿ ಪಾಳಿಯ ಪದ್ಧತಿಯನ್ನು ಅನುಸರಿಸುವುದು.

6, ಸೀನಿಂಗ್ ಮತ್ತು ನೈರ್ಮಲ್ಯ: ಎಲ್ಲಾ ಪ್ರವೇಶ ಮತ್ತು ನಿರ್ಗಮನ ಸ್ಥಳಗಳಲ್ಲಿ ಹಾಗೂ ಸಾಮಾನ್ಯ ಪ್ರದೇಶಗಳಲ್ಲಿ ಥರ್ಮಲ್ ಸ್ಮಾನಿorY, ಕೈ ತೊಳೆಯುವಿಕೆ ಮತ್ತು ಸ್ಯಾನಿಟೈಸರ್ ಗೆ ವ್ಯವಸ್ಥೆ ಕಲ್ಪಿಸುವುದು.

7. ನಿಯಮಿತ ಮಾನಿಟೈಸೇಷನ್: ಕೆಲಸದ ಸಂಪೂರ್ಣ ಆವರಣ, ಸಾಮಾನ್ಯ ಸೌಲಭ್ಯಗಳು ಮತ್ತು ಮಾನವ ಸಂಪರ್ಕಕ್ಕೆ ಬರುವ ಎಲ್ಲಾ ಸಾಧನ ಸಲಕರಣೆಗಳನ್ನು ಆಗಾಗ್ಗೆ ನೈರ್ಮಲೀಕರಣ ಮಾಡತಕ್ಕದ್ದು, (ಉದಾ:- ಬಾಗಿಲ ಹಿಡಿಕೆಗಳು ಇತ್ಯಾದಿಗಳು) ಇದನ್ನು ಕೆಲಸದ ಪಾಳಿಯ ಮಧ್ಯದಲ್ಲಿ ಸಹ ಖಾತರಿ ಪಡಿಸಿಕೊಳ್ಳುವುದು.

8. ಸಾಮಾಜಿಕ ಅಂತರ: ಕೆಲಸದ ಸ್ಥಳಗಳ ಮೇಲ್ವಿಚಾರಣೆ ಹೊಂದಿರುವ ಎಲ್ಲಾ ವ್ಯಕ್ತಿಗಳು ಕೆಲಸಗಾರರ ನಡುವೆ ಸಾಕಷ್ಟು ಅಂತರವನ್ನು ಪಾಳಿಗಳ ನಡುವೆ, ಸಿಬ್ಬಂದಿಗಳ ಊಟದ ವಿರಾಮ ಇತ್ಯಾದಿಗಳ ಸಂದರ್ಭದಲ್ಲಿ ಸಾಕಷ್ಟು ಅಂತರವನ್ನು ಕಾಯ್ದು ಕೊಂಡಿರುವ ಬಗ್ಗೆ ಖಚಿತಪಡಿಸಿಕೊಳ್ಳುವುದು.

LEAVE A REPLY

Please enter your comment!
Please enter your name here